Thursday, October 23, 2014

'Aa' 'Aa' 'Ee' 'Ee'

'ಆ' ತನ  'ಆ'ಕೆಯ  ಬಗ್ಗೆ  ,
'ಈ' ತನ  'ಈ' ಮಾತು ;

ಮನೆಯಂಗಳದಿ ಬೆಳೆದ ಹೂ;
ಅರಮನೆಯ ನಂದಾ ದೀಪ;
ಕೂಪ್ದಾಗೆ ಕೂಗ ಬ್ಯಾಡಿ, ಕೆಂದಾವರೆ 
ಬಾಡ್ತೈತಿ;
ಸಿಟ್ತ್ನಾಗೆ  ಸಿಡುಕ್ಬ್ಯಾಡಿ,ಸಂಪಿಗಿ ಸೊರಗೊಗ್ತೈತಿ;
ಕೇಸರಿ ಸೋಕಿಲ್ಲ, ಬೇರೇನೂ ಕೊಂಕಿಲ್ಲ;
ತ್ಯಾಗ ಮಾಡ್ಯಾಳೆ, ತೂಕದ ಕೂಸು;
ತುಂಬಿದಾ ಕೊಡಡಾಕಿ , ತುಳುಖಾನ್ಗಿಲ್ಲ,
ಮನಸಾ ಕೊಟ್ಟವ್ಲೇ, ಮನಸಿರುವಷ್ಟು
ಕನಸ ಕಟ್ಟ್ಅವ್ಳೇ ಕೈಗೆಟುಗದಷ್ಟು ;
ಕೆಲ್ಸಾ ಕದಿತಾವ್ಲೆ , ಕಳೆಯೋ ಹಾಂಗಿಲ್ಲ ;
ಮನಿಯಾ   ಬೆಳಗ್ತಾವ್ಳೆ  , ಬೆಳದಿಂಗಳಷ್ಟು;
ಖರ್ಚು ಮಾಡ್ತಾವ್ಳೆ  - ಕೋಪ್ ಬ್ಯಾಡಿ;
ಹಾಲಿನ ಮನ್ಸವ್ಳು, ಹಳಸ್ಬ್ಯಾಡಿ 
ಮುತ್ತಿನ ಮಾತವ್ಳು, ಮುತ್ತನೊಡಿಬ್ಯಾಡಿ ;
ಪ್ರಾಣ ಮಾಡ್ಗ್ಆವಳೇ , ತವರೆಂಬ ತಾವರೆಮ್ಯಾಗೆ ;
ಗಾಳಿಯ ಸುದ್ದಿಗೆ, ಹಿತ್ತಾಳೆ ಕೊಡಬ್ಯಾಡಿ ;
- ಆವ್ಯಯಾ

No comments:

Post a Comment