ಬೇಕು ಬೇಕು ಬೇಕು!!
ದೇವಲೋಕದ ಅಂತಹ್ಪುರವಾಗಿರಬೇಕು
//ಪ್ರಧಾನ ಖಾತೆ ಬೇಕು!
//ಸಂದೇಶಗಳ ಉತ್ತರವಷ್ಟೇ ಸಾಕು :)
ನೃತ್ಯಕ್ಕೊಂದು ತಾಳವಾಗಬೇಕು;
ಗಾನಕ್ಕೊಂದು ಶ್ರುತಿಸೇರಿಸಬೇಕು;
ಮಿಡಿತಕ್ಕೊಂದು ಮಾರ್ಧನಿ ಸಾಕು😀
ಅದಕ್ಕೆ ನಾನೇನು ಮಾಡಬೇಕು?
ಹೀಗೆಂದು...ಹಕ್ಕಿಯು ಹಾಡಿತು ....
ನೀನೊಂದು ನವಿಲಿನ ಗರಿಯು;
ನಿನ್ನ ಮನವೊಂದು ಜಿಂಕೆಯ ಚಿಗುರು,
ಪದಬಂದು ಪಟಾಕಿ ಸರವು;
ನಗೆಯೊಂದು ಜೇನಿನ ಹನಿಯು;
ನೀನೊಂದು ಬಂಗಾರದ ಶಿಲೆಯು ;
ನಾನರಿಯದೆ ನೀನಾದೆಯೆನ್ನ ಆಪ್ತರಲ್ಲೊಂದು;
ನಿನ್ನೊಳು ನಾಕಂಡೆ ಎನ್ನ ಹಸನ್ಮೊಗವು;
ನಿನ್ಮನ ಕರಗಲು ಸಾಕೆನ್ನ ಕವನವು,
ಬೇಕೆಂದರೆ ಬರುವುದು ಬೃಹದಾಕಾರದ ಕಾವ್ಯವು;
ಎಂಬುದ ಎನ್ನ ಹೃದಯವು ತಿಳಿದು ..
ಹಾಡಿತು ಮುಸ್ಸಂಜೆಯ ಈ ಹಾಡನು;
ತಪ್ಪದೇ ಅಪ್ಪಿಕೋ ಮೂಢನ ಈ ನಾಲ್ಕು ಸಾಲನು;
- ಅವ್ಯಯಾ